¡Sorpréndeme!

ವಂಡರ್ ಲಾ ವೇವ್ ರೈಡ್ & ಡ್ರಾಪ್ ಲೂಪ್ ಗೆ ಚಾಲನೆ ನೀಡಿದ ನಟಿ ಹರಿಪ್ರಿಯ | FILMIBEAT KANNADA

2019-09-25 725 Dailymotion

ಬಿಡದಿ--ದೇಶದ ಮುಂಚೂಣಿ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದಿರುವ ಬಿಡದಿಯ ವಂಡರ್ ಲಾ ಪಾರ್ಕ್ ನಲ್ಲಿ ಮೋಜುಪ್ರಿಯರಿಗೆ ಅದ್ಭುತ ಥ್ರೀಲ್ ನೀಡುವ ನಿಟ್ಟಿನಲ್ಲಿ ಹೊಸದಾಗಿ ಎರಡು ರೈಡ್ ಗಳನ್ನ ಆರಂಭಿಸಲಾಗಿದೆ. ಇವತ್ತು ನಟಿ ಹರಿಪ್ರಿಯಾ ಆ ಎರಡು ಹೊಸ ರೈಡ್ ಗಳನ್ನ ಉದ್ಘಾಟನೆ ಮಾಡಿದ್ರು. 360 ಡಿಗ್ರಿಯಲ್ಲಿ ತಿರುಗುವ ವೇವ್ ರೈಡರ್ ಹಾಗೂ ಅದ್ಭುತ ಥ್ರಿಲ್ ನೀಡುವ ಡ್ರಾಪ್ ಲೂಪ್ ವಾಟರ್ ರೈಡ್ ಎಂಬ ಎರಡು ಹೊಚ್ಚ ಹೊಸ ಗೇಮ್ ಗಳನ್ನ ಹರಿಪ್ರಿಯಾ ಉದ್ಘಾಟನೆ ಮಾಡಿ ವೇವ್ ರೈಡ್ ರ್ ಗೇಮ್ ನ್ನ ಸ್ವತಃ ಹರಿಪ್ರಿಯಾ ಹಾಡಿ ಎಂಜಾಯ್ ಮಾಡಿದ್ರು ವಂಡರ್ ಲಾ ಎಂಡಿ ಅರುಣ್ ಚಿಟ್ಟಿಲಪಲ್ಲಿ ಉಪಸ್ಥಿತರಿದ್ರು. ಈ ವೇಳೆ ಮಾತನಾಡಿದ ನಟಿ ಹರಿಪ್ರಿಯಾ ವಂಡರ್ ಲಾ ಒಂದು ಅದ್ಭುತ ಪ್ರವಾಸಿತಾಣ, ಒಂದು ದಿನ ಕಾಲ ಕಳೆಯಲು ವಂಡರ್ ಲಾ ಉತ್ತಮ ಜಾಗವೆನಿಸಿದೆ.